ಬಂಟ್ವಾಳ, ಜು. 05 (DaijiworldNews/SM): ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮದುವೆ ಸಮಾರಂಭದ ಬಳಿಕ ಮದುವೆ ಮನೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಡಿಜೆ ಕುಣಿತ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.



ಆರೋಪಿಗಳಾದ ಶಿವಪ್ಪ ಪೂಜಾರಿ, ಮಗ ತಿಲಕ್ ರಾಜ್ ಸೇರಿದಂತೆ ಮನೆಯ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಂ 269, ವ270, ಐಪಿಸಿ ಮತ್ತು ಕಲಂ 5(1) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ 2020 ಪ್ರಕರ ಕೇಸು ದಾಖಲಾಗಿದೆ.
ಬಂಟ್ವಾಳದ ಅಮ್ಮುಂಜೆಯ ಶಿವಪ್ಪ ಪೂಜಾರಿ ಮನೆಯಲ್ಲಿ ಜುಲೈ 1ರಂದು ಮದುವೆ ಕಾರ್ಯಕ್ರಮ ನಡೆದಿತ್ತು. ಮಗ ತಿಲಕ್ ರಾಜ್ ಮದುವೆಯಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆಯಾಗಿತ್ತು. ಈ ಬಗ್ಗೆ ವೀಡಿಯೋವೊಂದ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಇದರ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಮನೆಯವರ ವಿರುದ್ಧ ಕೇಸು ದಾಖಲಾಗಿದೆ.