ಮಂಗಳೂರು, ಏ 09: ಕರ್ನಾಟಕದಲ್ಲಿ ಮೇ 12ರಂದು ನಡೆಯುವ ರಾಜ್ಯ ವಿಧಾನ ಸಭೆ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಪ್ರಕರಣಗಳು ದಾಖಲಾಗಿವೆ. ಆದರೆ ಜಿಲ್ಲೆಯ ಬೆಳ್ತಂಗಡಿ ಮತ್ತು ಸುಳ್ಯ ಕ್ಷೇತ್ರದಲ್ಲಿ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರದಲ್ಲಿ ಪ್ರಕರಣ ದಾಖಲಾಗಿದೆ. ಮೂಡುಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು, ಪುತ್ತೂರಿನಲ್ಲಿ ತಲಾ ಒಂದೊಂದು ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 3, ಬಂಟ್ವಾಳ ಕ್ಷೇತ್ರದಲ್ಲಿ 2 ಪ್ರಕರಣ ದಾಖಲಾಗಿವೆ.
ಬಂಟ್ವಾಳ ಕ್ಷೇತ್ರದಲ್ಲಿ ಸಚಿವ ರಮಾನಾಥ ರೈ, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ರಾಮಕೃಷ್ಣ ಆಳ್ವ, ಅಬ್ಬಾಸ್ ಅಲಿ, ಬೇಬಿ ಕುಂದರ್ ಹಾಗೂ ಬಿಜೆಪಿಯ ಉಮೇಶ್ ಡಿ.ಎಂ., ರವಿ ಅರಸು, ಅವರ ವಿರುದ್ದ ಪ್ರಕರಣ ದಾಖಲಾಗಿದ್ದರೆ, ಮಂಗಳೂರು ದಕ್ಷಿಣದಲ್ಲಿ ಜ್ಯೋತಿ ಬಲ್ಮಠದ ಯಕ್ಷಮಿತ್ರ ಸಂಘಟನೆಯ ಅಧ್ಯಕ್ಷ ಹಾಗೂ ಬಿಜೆಪಿಯ ಶಂಕರ್ ಆಚಾರ್, ಹರೀಶ್ ಕೋಟ್ಯಾನ್ ಹಾಗೂ ಯೂಸಿ ನ್ಯೂಸ್ -ಯೂಸಿ ವೆಬ್ಡಾಟ್ಕಾಮ್, ದಾಖಲಾಗಿದೆ. ಮಂಗಳೂರು ಉತ್ತರದಲ್ಲಿ ಸಂದೀಪ್ ದೇವಾಡಿಗ, ಆಕಾಶ್, ಚರಣ್ ರಾಜ್, ರಕ್ಷಿತ್ ಭಂಡಾರಿ, ಪುತ್ತೂರಿನಲ್ಲಿ ಎಸ್ಕೆಎಸೆಸ್ಸೆಫ್ ಸಂಘಟನೆ, ಮೂಡುಬಿದಿರೆಯಲ್ಲಿ ರಾಕೇಶ್ ರಾಕ್ ಹೇರ್ ಡ್ರೆಸ್ಸೆಸ್ ಹಳೆಯಂಗಡಿ, ಮಥಾ ಡೆವಲಪರ್ಸ್ , ಭಗವತಿ ಯುನೈಟೆಡ್ ಪ್ರೆಂಡ್ಸ್, ಭಗವತಿ ಸೌಂಡ್ಸ್ ಆ್ಯಂಡ್ ಕ್ಯಾಟರರ್ಸ್ ಹಳೆಯಂಗಡಿ, ಜಯಶ್ರೀ ಮತ್ತು ಯಾದವ ದೇವಾಡಿಗ, ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ, ರಾಜೇಶ್ ಕೋಟ್ಯಾನ್, ಚಂದ್ರಶೇಖರ್ ಅಂಚನ್, ಆಶ್ರಿತಾ ಕ್ಯಾಟರರ್ಸ್ ಹೊಯಿಗೆಗುಡ್ಡೆ, ಮಂಗಳೂರು ಕ್ಷೇತ್ರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.