ಮಂಗಳೂರು, ಜು 06 (Daijiworld News/MSP): ನಗರದ ಹೊರವಲಯದ ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ ಭಾನುವಾರ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳ ಮೃತಪಟ್ಟ ಪ್ರಕರಣಸಂಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿ ಮೃತಪಟ್ಟ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿ, ಜಿಲ್ಲಾಧಿಕಾರಿಗೆ ಪರಿಹಾರ ಮೊತ್ತ ಹಸ್ತಾಂತರಿಸುವಂತೆ ಸೂಚಿಸಿದ್ದರು.
ಈ ಹಿನ್ನಲೆಯಲ್ಲಿ ಸೋಮವಾರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರ ವಿತರಿಸಿದರು. ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಉಪಸ್ಥಿತರಿದ್ದರು.
ಗುರುಪುರ ಬಂಗ್ಲೆಗುಡ್ಡೆಯ ಬಳಿ ಗುಡ್ಡ ಕುಸಿದು ಸುಮಾರು ನಾಲ್ಕು ಮನೆಗಳಿಗೆ ಹಾನಿಯಾಗಿತ್ತು. ಘಟನೆಯಲ್ಲಿ ಗುರುಪುರ ತಾರಿಕರಿಯ ನಿವಾಸಿ ಶರೀಫ್ - ಶಾಹಿದಾ ದಂಪತಿಯ 16 ವರ್ಷದ ಪುತ್ರ ಸಫ್ವಾನ್ ಮತ್ತು 10 ವರ್ಷದ ಪುತ್ರಿ ಸಹಲಾ ಮೃತಪಟ್ಟಿದ್ದರು. ಘಟನೆಯಲ್ಲಿ ಶಾಹಿದಾ ಅವರಿ ಗಾಯಗೊಂಡಿದ್ದರು. ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ನಂತರ ಎನ್ ಡಿಆರ್ ಎಫ್ ಪಡೆ ಮಣ್ಣಿನಡಿಯಿಂದ ಇಬ್ಬರು ಮಕ್ಕಳ ಮೃತದೇಹವನ್ನು ಹೊರತೆಗೆದಿದ್ದರು.