ಉಡುಪಿ, ಜು. 06 (DaijiworldNews/MB) : ಜುಲೈ 4 ರ ಶನಿವಾರ ಜಿಲ್ಲೆಯ ಸಾಸ್ತಾನ ಟೋಲ್ಗೇಟ್ನಲ್ಲಿ ಒಂದು ರೂಪಾಯಿ ಚಿಲ್ಲರೆಯ ವಿಷಯದಲ್ಲಿ ಯುವಕರು ಟೋಲ್ಗೇಟ್ ಸಿಬ್ಬಂದಿಗಳ ಜೊತೆ ಜಗಳಕ್ಕೆ ಇಳಿದಿದ್ದು ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ಶನಿವಾರ ಸಂಜೆ ಟೋಲ್ಗೇಟ್ನ ಸಿಬ್ಬಂದಿ ತೆಕ್ಕಟ್ಟೆಯಿಂದ ಪೇತ್ರಿಗೆ ಹೋಗುವಾಗ ಐದು ರೂಪಾಯಿಗಳ ಬದಲು ನಾಲ್ಕು ರೂಪಾಯಿ ನಾಣ್ಯಗಳನ್ನು ನೀಡಿದ್ದರು. ಬಳಿಕ ಪೇತ್ರಿಯಿಂದ ಯುವಕರು ಹಿಂದಿರುಗುವಾಗ ಅದೇ ಟೋಲ್ಗೇಟ್ ಸಿಬ್ಬಂದಿಯ ಬಳಿ ಒಂದು ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ.
ಯುವಕರು ಈ ಸಿಬ್ಬಂದಿ ದುರಹಂಕಾರಿ ಎಂದು ಆರೋಪಿಸಿದ್ದು ಒಂದು ರೂಪಾಯಿ ಹಿಂದಕ್ಕೆ ನೀಡುವಂತೆ ಒತ್ತಾಯಿಸಿ ಸಿಬ್ಬಂದಿಯ ವರ್ತನೆಯಿಂದ ಕೋಪಗೊಂಡು ಅವರೊಂದಿಗೆ ಜಗಳಕ್ಕೆ ಇಳಿದಿದ್ದಾರೆ.
ಇನ್ನು ಈ ಗಲಾಟೆಯಿಂದ ಯುವಕರು ಹಾಗೂ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಮರೆತುಬಿಟ್ಟಿದ್ದಾರೆ. ಅಲ್ಲಿದ್ದ ಉಳಿದ ಜನರು ಮಧ್ಯಪ್ರವೇಶಿಸಿ ಇವರನ್ನು ಸಮಾಧಾನ ಪಡಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಟೋಲ್ಗೇಟ್ಗಳನ್ನು ಮುಚ್ಚಲಾಗಿತ್ತು. ಇದೀಗ ಪುನಃ ಕಾರ್ಯನಿರ್ವಹಿಸುತ್ತಿದೆ.