ಕುಂದಾಪುರ, ಏ 10 : ಇಲ್ಲಿನ ಪ್ರಸಿದ್ಧ ಹೋಟೆಲ್ ಒಂದಕ್ಕೆ ನೀತಿ ಸಂಹಿತೆ ಹಿನ್ನೆಲೆ ತಪಾಸಣೆಗೆ ತೆರಳಿದ್ದ ವೇಳೆ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆಗೆ ಯತ್ನ ಪಡಿಸಿದ ಘಟನೆ ಕುಂದಾಪುರ ಸಮೀಪದ ಅಂಕದಕಟ್ಟೆಯ ಹೋಟೆಲ್ ನಲ್ಲಿ ಏ. 09 ಸೋಮವಾರ ತಡ ರಾತ್ರಿ ನಡೆದಿದೆ. ಹೋಟೇಲ್ ನಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದಾರೆ ದೂರಿನ ಹಿನ್ನೆಲೆಯಲ್ಲಿ , ಚುನಾವಣಾ ಅಧಿಕಾರಿ ಸಹಾಯಕ ಕಮೀಷನರ ಭೂಬಾಲನ್, ಪ್ರೊಬೇಷನರಿ ಎಸಿ ಪೂವಿತ, ಅಬಕಾರಿ ಡಿಸಿ ನೀರು ನಂದನ್ ಅವರೊಂದಿಗೆ ತಪಾಸಣೆಗೆ ತೆರಳಿ ಹೋಟೆಲ್ ನಲ್ಲಿ ಚಿತ್ರೀಕರಣ ಮಾಡುತ್ತಿರುವ ವೇಳೆ ಗ್ರಾಹಕರರು ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರನ್ನು ಮತ್ತು ಗ್ರಾಹಕನನ್ನು, ಸಹಾಯಕ ಕಮೀಷರನವರ ದೂರಿನಂತೆ ಕುಂದಾಪುರ ಪೋಲಿಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ನೀರ್ದೆಶನದಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹಾಯಕ ಕಮೀಷನರ್ ಭೂಬಾಲನ್ ತಿಳಿಸಿದ್ದಾರೆ.