ಕಾಸರಗೋಡು, ಜು 06 (DaijiworldNews/SM): ಜಿಲ್ಲೆಯಲ್ಲಿ ಸೋಮವಾರ ಆರು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸಂಪರ್ಕದಿಂದ ಯಾರಿಗೂ ಸೋಂಕು ದೃಢಪಟ್ಟಿಲ್ಲ. ನಾಲ್ವರು ವಿದೇಶ ಹಾಗೂ ಇಬ್ಬರು ಹೊರ ರಾಜ್ಯದಿಂದ ಬಂದವರು.

12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಸೋಮವಾರ ಹೊಸ ಪಾಸಿಟಿವ್ ಪ್ರಕರಣಗಳಿಲ್ಲ. ಕಾಞ0ಗಾಡ್ 3, ಕಯ್ಯೂರು ಚಿಮೇನಿ, ಅಜನೂರು, ಕೋಡೋ ಬೇಳೂರು ತಲಾ ಒಬ್ಬರಿಗೆ ಸೋಂಕು ತಗಲಿದೆ.
ಜಿಲ್ಲೆಯಲ್ಲಿ 7,193 ಮಂದಿ ನಿಗಾದಲ್ಲಿದ್ದು, 322 ಐಸೋಲೇಷನ್ ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.