ಉಡುಪಿ, ಜು 07 (Daijiworld News/MSP): " ತಮ್ಮ ಕೋವಿಡ್-19 ಪರೀಕ್ಷೆಗಳ ವರದಿಗಳನ್ನು ಸ್ವೀಕರಿಸುವ ಮೊದಲು ವಿವಿಧ ರಾಜ್ಯಗಳಿಂದ ಜನರು ಉಡುಪಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷಯ. ಒಂದು ವೇಳೆ ಜನರು ಸ್ವೀಕರಿಸಿದ ವರದಿಗಳು ಪಾಸಿಟಿವ್ ಆಗಿರುವುದು ಕಂಡುಬಂದರೆ, ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು "ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಸಿದ್ದಾರೆ.

ಆದ್ದರಿಂದ ಇತರ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಬರುವ ಜನರು ಕರೋನವೈರಸ್ ಪರೀಕ್ಷಾ ವರದಿಗಳನ್ನು ಪಡೆದ ಅನಂತರವೇ ಜಿಲ್ಲೆಗೆ ಬರಬೇಕು. ಖಾಸಗಿ ಲ್ಯಾಬ್ಗಳೂ ಸಹ ಅಂತಹ ವ್ಯಕ್ತಿಗಳ ವರದಿಯನ್ನು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದಿದ್ದಾರೆ.
ಬಸ್ಗಳಲ್ಲಿ ಸಾಮಾಜಿಕ ಅಂತರವನ್ನು ಪಾಲನೆ ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂತಹ ಬಸ್ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.