ಮಂಗಳೂರು, ಜು. 07 (DaijiworldNews/MB) : ತೀವ್ರ ಮಳೆಯಿಂದಾಗಿ ಮನೆಯ ಕಂಪೌಂಡ್ ಕುಸಿದು ಮಹಿಳೆಯ ಮೇಲೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಗೋಳಿತೊಟ್ಟು ಬಾಲಮಂದಿರ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ಮಹಿಳೆಯನ್ನು ಗೋಳಿತೊಟ್ಟು ಬಾಲಮಂದಿರ ಬಳಿಯ ಚಂದ್ರಶೇಖರ ಎಂಬವರ ಪತ್ನಿ ಶೋಭಾ(49) ಎಂದು ಗುರುತಿಸಲಾಗಿದೆ.
ತೀವ್ರವಾದ ಮಳೆಯಿಂದಾಗಿ ಮನೆಯ ಕಂಡೌಂಡ್ ಕುಸಿದು ಮಹಿಳೆಯ ಮೇಲೆ ಬಿದ್ದು ಇದರಡಿ ಸಿಲುಕಿ ಮಹಿಳೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಥಳಕ್ಕೆ ಪುತ್ತೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.