ಕಾಸರಗೋಡು, ಜು. 07 (DaijiworldNews/MB) : ಜಿಲ್ಲೆಯಲ್ಲಿ ಮಂಗಳವಾರ ಗರ್ಭಿಣಿ ಸೇರಿದಂತೆ 13 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸಾಂದರ್ಭಿಕ ಚಿತ್ರ
ಈ ಪೈಕಿ 8 ಮಂದಿ ವಿದೇಶದಿಂದ ಬಂದವರಾಗಿದ್ದರೆ, ಇಬ್ಬರು ಬೆಂಗಳೂರಿನಿಂದ ಬಂದವರಾಗಿದ್ದಾರೆ. ಹಾಗೆಯೇ ಮಂಗಳೂರಿಗೆ ತೆರಳಿ ಮರಳಿದ್ದ ಇಬ್ಬರು ಹಾಗೂ ಮಂಗಳೂರುನಲ್ಲಿ ವಾಸ್ತವ್ಯ ಇದ್ದು ಊರಿಗೆ ಮರಳಿದ್ದ ಗರ್ಭಿಣಿಗೆ ಸೋಂಕು ಪಾಸಿಟಿವ್ ಆಗಿದೆ.
ಚೆಂಗಳ 3, ಬದಿಯಡ್ಕ 2, ಕಾಸರಗೋಡು, ಮಂಗಲ್ಪಾಡಿ ಪನತ್ತಡಿ, ಮುಳಿಯಾರು, ಮಧೂರು, ದೇಲಂಪಾಡಿ, ಉದುಮ, ಕಾಞಂಗಾಡ್ ತಲಾ ಒಬ್ಬರಿಗೆ ಮಂಗಳವಾರ ಸೋಂಕು ಇರುವುದು ಖಚಿತವಾಗಿದೆ. 7037 ಮಂದಿ ನಿಗಾದಲ್ಲಿದ್ದು, 327 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.