ಬೆಳ್ತಂಗಡಿ, ಜು. 07 (DaijiworldNews/MB) : ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿ ಹೈವೆ ಪೆಟ್ರೋಲಿಂಗ್ನವರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಚಾರ್ಮಾಡಿ ಕಡೆಯಿಂದ KA 21- 6521ಮತ್ತು KA 21-9583 ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಾಟ ಪತ್ತೆಯಾಗಿದ್ದು ಐವರನ್ನು ಬಂಧಿಸಲಾಗಿದೆ.

ತ್ರಿಚಕ್ರ ವಾಹನದಲ್ಲಿ ಎರಡು ದನ, ಒಂದು ಕರುವನ್ನು ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ.
ಇದರಲ್ಲಿದ್ದ ಅಣ್ಣು ಇಂದಬೆಟ್ಟು, ಶಿವಯ್ಯ ಇಂದಬೆಟ್ಟು, ಲಿಂಗಪ್ಪ ಗೌಡ ಬರಾಯ ಕನ್ಯಾಡಿ, ಚಂದ್ರಶೇಖರ ನಡ, ಚಂದ್ರಹಾಸ ಮುಂಡಾಜೆ ಎಂಬುವರನ್ನು ವಶಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತರಿಂದ ಎರಡು ತ್ರಿಚಕ್ರ ವಾಹನ,ದನಗಳ ಸಹಿತ 1.24,00.00ರೂ.ಗಳ ಮೌಲ್ಯದ ಸ್ವತ್ತುಗಳನ್ನು ವಶಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣಾ ಎಎಸ್ ಐ ರಾಮಯ್ಯ ಹೆಗ್ಡೆ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.