ಉಡುಪಿ ಜು 08 (Daijiworld News/MSP): ಉಡುಪಿ ಜಿಲ್ಲೆಯ ಸಾಲಿಗ್ರಾಮದ ಮಾಣಿಕಟ್ಟಿನಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರ್ತಿಕ ( 15) ಆತ್ಮಹತ್ಯೆ ಮಾಡಿಕೊಂಡ ಬಾಲಕನಾಗಿದ್ದಾನೆ.

ಈತ ಕೋಟದ ವಿವೇಕ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ.ಇತ್ತೀಚಿಗೆ ತಾಯಿ ಮನೆಗೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಕೊರೊನಾ ಪತ್ತೆಯಾಗಿತ್ತು.
ಈ ಹಿನ್ನಲೆಯಲ್ಲಿ ತಾಯಿ ರುದ್ರಮ್ಮ ಮತ್ತು ಮಗನಿಗೆ ಹೋಂ ಕ್ವಾರಂಟೈನ್ ಹಾಕಲಾಗಿತ್ತು. ಹೀಗಾಗಿ ಮಗನನ್ನು ಆಟ ಆಡಲು ಹೊರಗೆ ಬಿಡುತ್ತಿರಲಿಲ್ಲ.ಇದೇ ವಿಚಾರವಾಗಿ ಮನನೊಂದು ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.
ಮೃತನ ಕೊವೀಡ್ ವರದಿ ಬಂದ ಬಳಿಕ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.