ಕಾಸರಗೋಡು, ಜು 08 (Daijiworld News/MSP): : ಹುಬ್ಬಳ್ಳಿಯಿಂದ ಅಂಬ್ಯುಲೆನ್ಸ್ ಮೂಲಕ ಕರೆ ತರಲಾಗಿದ್ದ ಮೊಗ್ರಾಲ್ ಪುತ್ತೂರು ನಿವಾಸಿಯೋರ್ವರು ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದು , ಕೊರೊನಾ ಸೋಂಕು ಸಂಶಯದ ಹಿನ್ನಲೆಯಲ್ಲಿ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ.

ಮೃತ ವ್ಯಕ್ತಿ ಹುಬ್ಬಳ್ಳಿಯಿಂದ ಅಂಬ್ಯುಲೆನ್ಸ್ ನಲ್ಲಿ ತಲಪಾಡಿ ಬಂದಿದ್ದು , ಅಲ್ಲಿಂದ ಕಾರು ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಅವರನ್ನು ತಲುಪಿಸಲಾಗಿತ್ತು. ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಪ್ರಾಥಮಿಕ ತಪಾಸಣೆಯಿಂದ ಪಾಸಿಟಿವ್ ಪತ್ತೆಯಾಗಿದ್ದು, ಪಾಸಿಟಿವ್ ದೃಢಪಡಿಸಲು ಗಂಟಲ ದ್ರವವನ್ನು ಪೆರಿಯದ ಕೇಂದ್ರ ವಿದ್ಯಾಲಯದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಆದರೆ ಜನರಲ್ ಆಸ್ಪತ್ರೆಗೆ ತಲುಪಿಸಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದು , ಇವರನ್ನು ಕರೆತಂದಿದ್ದ ಇಬ್ಬರು ಸಂಬಂಧಿಕರು ಕ್ವಾರಂಟೈನ್ ಗೆ ತೆರಳಿದ್ದಾರೆ .