ಸುರತ್ಕಲ್, ಜು 08 (Daijiworld News/MSP): ಇಲ್ಲಿನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯುನಿಟ್ ನ 24 ಜವಾನರಿಗೆ ಸೋಂಕು ದೃಢಪಟ್ಟಿದ್ದು ದ.ಕ ಜಿಲ್ಲಾಡಳಿತಕ್ಕೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಈಗಾಗ್ಲೇ ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು 1359 ಪ್ರಕರಣ ಇದುವರೆಗೆ ದೃಢಪಟ್ಟಿದೆ. ಈ ಪೈಕಿ ಇನ್ನು 650 ಸಕ್ರಿಯ ಪ್ರಕರಣಗಳಾಗಿವೆ.

ಸುರತ್ಕಲ್ ಪ್ರದೇಶದಲ್ಲಿ ಒಟ್ಟು 33 ಮಂದಿಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿದೆ. ಸಿಐಎಸ್ಎಫ್ ಯೂನಿಟ್ನ 24 ಜವಾನರಿಗೆ ಹಾಗೂ ಒಂದು ವರ್ಷದ ಮಗುವಿಗೆ ಸೇರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯುನಿಟ್ನ 25 ಮಂದಿ ಸೋಂಕು ಕಂಡುಬಂದಿದೆ.
ಯುನಿಟ್ನ್ನು ಜಿಲ್ಲಾಡಳಿತದ ವತಿಯಿಂದ ಸೀಲ್ಡೌನ್ ಮಾಡಲಾಗಿಲ್ಲದಿದ್ದರೂ ಎಚ್ಚರಿಕೆಯ ಬಿತ್ತಿಪತ್ರಿಕೆ ಅಲ್ಲಲ್ಲಿ ಅಂಟಿಸಿ ಸುತ್ತಮುತ್ತದ ಜನರಿಗೆ ಜಾಗೃತರಾಗಿರುವಂತೆ ಸೂಚಿಸಲಾಗಿದೆ. ಹೋಂ ಕ್ವಾರಂಟೈನ್ ಮೂಲಕ ಚಿಕಿತ್ಸೆ ನೀಡಲು ಸರಕಾರ ಆದೇಶಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವ ಬದಲು ಜವಾನರು ಇರುವಲ್ಲಿಯೇ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಕೈಗೊಳ್ಳುವ ಸಾಧ್ಯತೆಯಿದೆ.