ಉಡುಪಿ, ಜು 08 (DaijiworldNews/PY): ಕೊರೊನಾ ಆಸ್ಪತ್ರೆಯಲ್ಲಿರುವ ಸೋಂಕಿತರೋರ್ವರು ಆಸ್ಪತ್ರೆಯಿಂದ ಪತ್ನಿಗೆ ವಿಡಿಯೋ ಕಾಲ್ನಲ್ಲಿ ನೃತ್ಯ ಮಾಡಿ ಮನೆಯವರನ್ನು ಖುಷಿಪಡಿಸಿದ್ದಾರೆ.

ಈ ವ್ಯಕ್ತಿಯು ಉಡುಪಿ ಜಿಲ್ಲೆಯ ಕೋಟದ ಹೋಟೆಲ್ ಮಾಲೀಕರಾಗಿದ್ದು, ಜಿಲ್ಲೆಯ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮನೆಯವರಿಗೆ ಧೈರ್ಯ ತುಂಬಿದ್ದಾರೆ.
ವಿಡಿಯೋ ಕಾಲ್ನಲ್ಲಿ ಇವರು, ರಾಜ್ಕುಮಾರ್ ಅವರ ಹಾಡಿಗೆ ನೃತ್ಯ ಮಾಡಿದ್ದು, ಮನೆಯವರನ್ನು ಖುಷಿಪಡಿಸುವ ಪ್ರಯತ್ನ ಮಾಡಿದ್ದಾರೆ. ಮನೆಯವರು ಭಯಭೀತರಾಗಬಾರದು ಎನ್ನುವ ಉದ್ದೇಶದಿಂದ ಈ ವಿಡಿಯೋ ಮಾಡಿದ್ದಾರೆ.
ಕೊರೊನಾ ಬಗ್ಗೆ ಭಯಬೇಡ ಎಂದು ತಿಳಿಸುವ ಮೂಲಕ ಇವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ನಾನು ಚೆನ್ನಾಗಿದ್ದೇನೆ. ಕೊರೊನಾ ಬಗ್ಗೆ ಭಯ ಬೇಡ, ಜಾಗೃತಿ ಇರಲಿ ಎನ್ನುವ ಸಂದೇಶದೊಂದಿಗೆ ವಿಡಿಯೋ ಮಾಡಿದ್ದಾರೆ.