ಉಡುಪಿ, ಜು. 08 (DaijiworldNews/MB) : ಹೋಂ ಕ್ವಾರಂಟೈನ್ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಕೊರೊನಾ ವರದಿ ನಗೆಟಿವ್ ಬಂದಿದೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮದ ಮಾಣಿಕಟ್ಟಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದ ಈತನ ತಾಯಿ ಮನೆಗೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಇತ್ತೀಚೆಗೆ ಕೊರೊನಾ ಪತ್ತೆಯಾಗಿತ್ತು.
ಈ ಕಾರಣದಿಂದ ತಾಯಿ ರುದ್ರಮ್ಮ ಮತ್ತು ಮಗ ಕಾರ್ತಿಕನನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಕ್ವಾರಂಟೈನ್ಗೆ ಒಳಗಾಗಿರುವ ಕಾರಣದಿಂದ ಆಟವಾಡುಲು ಬಿಡುತ್ತಿರಲಿಲ್ಲ. ಇದರಿಂದ ಮನನೊಂದು ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದೀಗ ಮೃತ ಬಾಲಕನ ಕೊರೊನಾ ವರದಿಯು ನೆಗೆಟಿವ್ ಬಂದಿದೆ.
ಈ ಕುರಿತಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.