ಕಾಸರಗೋಡು, ಜು 08 (Daijiworld News/MSP): ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಿಂದ ಕಾಸರಗೋಡಿಗೆ ತರಕಾರಿ, ಹಣ್ಣು ಹಂಪಲು ತರುವ ವಾಹನಗಳಿಗೆ ಪಾಸ್ ಕಡ್ಡಾಯಗೊಳಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಕೊರೊನಾ ನಿಯಂತ್ರಣ ಸಮಿತಿ ಸಭೆ ಈ ತೀರ್ಮಾನ ತೆಗೆದುಕೊಂಡಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ( ಆರ್ . ಟಿ . ಒ) ಪಾಸ್ ಮಂಜೂರುಗೊಳಿಸಲಿದೆ.
ವಾಹನ ಚಾಲಕ ಹಾಗೂ ಇತರ ಸಿಬಂದಿಗಳು ಏಳು ದಿನಗಳಿಗೊಮ್ಮೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಗಾಗಿ ವೈದ್ಯಕೀಯ ಪ್ರಮಾಣ ಪತ್ರ ಪಡೆಯಬೇಕು ಎಂದು ತಿಳಿಸಿದೆ. ವೈದ್ಯಕೀಯ ಪರೀಕ್ಷಾ ಪ್ರಮಾಣಪತ್ರ ಹಾಗೂ ಆರ್ . ಟಿ . ಒ ಒದಗಿಸಿದ ಪಾಸ್ ಇದ್ದಲ್ಲಿ ಕರ್ನಾಟಕಕ್ಕೆ ತೆರಳಿ ತರಕಾರಿ ಹಾಗೂ ಹಣ್ಣು ಹಂಪಲು ಲಾರಿಗಳಿಗೆ ಪ್ರವೇಶ ಲಭಿಸಲಿದೆ.
ಈ ಕುರಿತು ಹಾಲು - ತರಕಾರಿ ವ್ಯಾಪಾರಿಗಳ ಸಭೆ ಶೀಘ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕರೆಯಲು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು .