ಕಾಸರಗೋಡು, ಜು. 08 (DaijiworldNews/MB) : ಜಿಲ್ಲೆಯಲ್ಲಿ ಬುಧವಾರ ಒಂದು ವರ್ಷದ ಮಗು ಸೇರಿದಂತೆ ನಾಲ್ವರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ನಾಲ್ವರು ವಿದೇಶದಿಂದ ಬಂದವರು. ಜೂನ್ ನಾಲ್ಕರಂದು ಸೌದಿಯಿಂದ ಬಂದ ಮಂಜೇಶ್ವರದ 55 ವರ್ಷದ ಮಹಿಳೆ ಹಾಗೂ ಒಂದು ವರ್ಷದ ಮೊಮ್ಮಗ, 24 ರಂದು ಕುವೈಟ್ ನಿಂದ ಬಂದಿದ್ದ ಕಾಞಂಗಾಡ್ನ 39 ವರ್ಷದ ಹಾಗೂ ಒಮಾನ್ ನಿಂದ ಬಂದಿದ್ದ 49 ವರ್ಷದ ಪಳ್ಳಿಕೆರೆ ನಿವಾಸಿಗೆ ಸೋಂಕು ದೃಢಪಟ್ಟಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಮಂದಿ ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ 6828 ಮಂದಿ ನಿಗಾದಲ್ಲಿದ್ದು, ಈ ಪೈಕಿ 315 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ. ಹಾಗೆಯೇ ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ.