ಉಡುಪಿ, ಜು. 08 (DaijiworldNews/MB) : ಜಿಲ್ಲೆಯಲ್ಲಿ ಬುಧವಾರ ಮತ್ತೆ 31 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1421ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ 20493 ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಈ ಪೈಕಿ 1421 ವರದಿ ಪಾಸಿಟಿವ್ ಬಂದರೆ 15992 ವರದಿಗಳು ನೆಗೆಟವ್ ಬಂದಿದೆ. ಇನ್ನು 3080 ವರದಿಗಳು ಬಾಕಿಯಿದೆ.
ಉಡುಪಿ ಜಿಲ್ಲಾಡಳಿತ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ಪ್ರಕಾರ, ಒಟ್ಟು 4,875 ಜನರು 28 ದಿನಗಳ ಕ್ವಾರಂಟೈನ್ನ್ನು ಪೂರ್ಣಗೊಳಿಸಿದ್ದಾರೆ, ಒಟ್ಟು 4,875 ಜನರು 14 ದಿನಗಳ ಕ್ವಾರಂಟೈನ್ನ್ನು ಪೂರ್ಣಗೊಳಿಸಿದ್ದಾರೆ. 1,197 ಜನರು ಪ್ರಸ್ತುತ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.