ಪುತ್ತೂರು, ಜು 09 (Daijiworld News/MSP): ವಾರದ ಹಿಂದೆ ಸೋಂಕು ತಗುಲಿ ಕೂರ್ನಡ್ಕದ ಬಾಣಂತಿ ಮಂಗಳೂರಿನ ವೆನ್ಲಾಕ್ ಕೊವೀಡ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದು, ಆಕೆಯ ಹತ್ತು ದಿನದ ನವಜಾತ ಶಿಶುವಿಗೂ ಸೋಂಕು ಬಾಧಿಸಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ.

ಮೃತ ಮಹಿಳೆಯ ಅಂತ್ಯಕ್ರಿಯೆ ಸುರಕ್ಷತಾ ಕ್ರಮಗಳೊಂದಿಗೆ ಕೂರ್ನಡ್ಕದ ಜುಮ್ಮಾ ಮಸೀದಿಗೆ ಒಳಪಟ್ಟ ಬೆದ್ರಾಳದ ದಫನ ಭೂಮಿಯಲ್ಲಿ ನೆರವೇರಿತು.
ಮೃತಳ ಸಂಬಂಧಿ ಅಲಂಕಾರು ನಿವಾಸಿ 42 ವರ್ಷದ ವಯಸ್ಸಿನ ಮಹಿಳೆ 4 ದಿನಗಳ ಹಿಂದೆ ಸೋಂಕಿನ ಶಂಕೆ ಹಿನ್ನಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಇದೀಗ ಪರೀಕ್ಷಾ ವರದಿ ಪ್ರಕಾರ ಆಕೆಗೂ ಸೋಂಕು ದೃಢಪಟ್ಟಿದೆ.