ಉಡುಪಿ, ಜು 09 (DaijiworldNews/PY): ಶಾರ್ಟ್ ಸರ್ಕ್ಯೂಟ್ನಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಜಾಮಿಯ ಮಸೀದಿ ಸಮೀಪದ ಯೂನಿಯನ್ ಬ್ಯಾಂಕ್ ಬಳಿ ಗುರುವಾರ ಮುಂಜಾನೆ 5 ಗಂಟೆಯ ಸುಮಾರಿಗೆ ನಡೆದಿದೆ.

ಘಟನೆಯ ಪರಿಣಾಮ ನಾಲ್ಕು ಕಂಪ್ಯೂಟರ್ಗಳು ಹಾಗೂ ಹಲವು ಕಡತಗಳಿಗೆ ಹಾನಿಯಾಗಿದೆ. ಘಟನೆಯು ಬ್ಯಾಂಕ್ನಲ್ಲಿರುವ ಹವಾನಿಯಂತ್ರಕದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ತಕ್ಷಣವೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ವೃತ್ತ ನಿರೀಕ್ಷಕರು ಆಗಮಿಸಿದ್ದು, ಪರಿಶೀಲಿಸಿದ್ದಾರೆ.
ಬ್ಯಾಂಕ್ನಲ್ಲಿ ಸದ್ಯ ಯಥಾಪ್ರಕಾರವಾಗಿ ಕಾರ್ಯಗಳು ನಡೆಯುತ್ತಿವೆ.