ಮಂಗಳೂರು, ಜು. 09 (DaijiworldNews/MB) : ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯು ಕೊರೊನಾ ಸೋಂಕು ಎದುರಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಅಲ್ಬಮ್ - 30 ಔಷಧಿಯನ್ನು ಬಿಡುಗಡೆ ಮಾಡಿದೆ.


ಹಾಗೆಯೇ ಇದರೊಂದಿಗೆ ಕೊರೊನಾದಿಂದ ತಡೆಗಟ್ಟಲು ಫಾದರ್ ಮುಲ್ಲರ್ ಹ್ಯಾಂಡ್ರಬ್ ಹ್ಯಾಂಡ್ ಸ್ಯಾನಿಟೈಝರ್ನ್ನು ಕೂಡಾ ಬಿಡುಗಡೆ ಮಾಡಿದೆ.

ಕೋವಿಡ್ 19 ರೋಗ ವಿರುದ್ಧ ದೇಹದಲ್ಲಿ ನಿರೋಧಕ ಶಕ್ತಿಯನ್ನು ವೃದ್ಧಿಸುವ ಈ ಔಷಧ ಸಹಾಯಕವಾಗಿದ್ದು ಇದನ್ನು ಮಕ್ಕಳು, ವಯಸ್ಕರು ಸೇವಿಸಬಹುದಾಗಿದೆ.