ಕಾರ್ಕಳ, ಜು 10 (Daijiworld News/MSP): ಆಭರಣಗಳ ಬಾಕ್ಸ್ ತಯಾರಿಕ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಸೊತ್ತು ಸುಟ್ಟು ಕರಕಲಾದ ಹೋದ ಘಟನೆ ಮುಂಡ್ಕೂರಿನಲ್ಲಿ ಜು.10 ರ ಶುಕ್ರವಾರ ನಡೆದಿದೆ.



ಕಾರ್ಕಳದ ತಾಲೂಕಿನ ಮುಂಡ್ಕೂರು ಗ್ರಾಮದ ಸುಧೀರ್ ಶೆಣೈ ಎಂಬವರಿಗೆ ಸೇರಿದ ಫ್ಯಾಕ್ಟರಿಯಾಗಿದ್ದುಮುಂಜಾನೆ ಆಕಸ್ಮಿಕ ಕಾಣಿಸಿಕೊಂಡಿದ್ದು ಅಪಾರ ಸೊತ್ತುಗಳು ನಾಶವಾಗಿವೆ.
ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.