ಮಂಗಳೂರು, ಜು 10 (Daijiworld News/MSP): ಉಳ್ಳಾಲದಲ್ಲಿ ಸೋಂಕಿನಿಂದ ಸಾವಿಗೀಡಾದ ಒಂದನೇ ಮತ್ತು ಎರಡನೇ ವ್ಯಕ್ತಿಗಳಿಂದ ಕೊರೊನಾ ಹರಡಿದ್ದು ಈ ಇಬ್ಬರ ಮನೆಯವರ ಟೆಸ್ಟ್ ಮಾಡಿದಾಗ ಬಹುತೇಕರ ರಿಪೋರ್ಟ್ ಪಾಸಿಟಿವ್ ಆಗಿವೆ ಎಂದು ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ.

ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಹೀಗಾಗಿ 50% ರ್ಯಾಂಡಮ್ ಟೆಸ್ಟ್ ಮಾಡಲಾಗಿದೆ. ಹೆಚ್ಚು ರ್ಯಾಂಡಮ್ ಟೆಸ್ಟ್ ನಡೆಸಿದ ಪರಿಣಾಮ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದೆ. ಗುರುವಾರ ಒಂದೇ ದಿನ 33 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಈ ಬಗ್ಗೆ ಗುರುವಾರ ಸಂಜೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದ್ದು, ಉಳ್ಳಾಲ ನಗರಸಭೆಯ ಪ್ರತಿ ವಾರ್ಡ್ ನಲ್ಲಿ ಯುವಕರ ಪಡೆ ರಚನೆಗೆ ಮುಂದಾಗಿದ್ದೇವೆ. ಆಸಕ್ತಿ ಇರುವವರು ಸಂಬಂದ ಪಟ್ಟ ಅಧಿಕಾರಿಗಳ ಸಂಪರ್ಕಿಸಿದರೆ ಅವರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ದಿನಗಳಲ್ಲಿ ಪ್ರತಿ ಮನೆಯ ಸರ್ವೆ ಕಾರ್ಯ ಮಾಡಲಾಗುವುದು.
ಅಲ್ಲದೆ ಆ್ಯಂಬುಲೆನ್ಸ್ ಕೊರತೆಯ ಹಿನ್ನಲೆಯಲ್ಲಿ ದಾನಿಗಳ ಮುಖಾಂತರ ಆ್ಯಂಬುಲೆನ್ಸ್ ಖರೀದಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.