ಬೆಳ್ತಂಗಡಿ, ಜು 10 (Daijiworld News/MSP): ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುಗೆರೋಡಿಯ ಪುಟ್ಟ ಬಾಲಕ "ಇಂಡಿಯಾ ಬುಕ್ ಆಫ್ ರೆಕಾರ್ಡ್" ನಲ್ಲಿ ದಾಖಲೆ ಬರೆದಿದ್ದಾನೆ.

ಇನ್ನು ಮೂರು ವರ್ಷದ ತುಂಬದ ಈ ಬಾಲಕನ ಹೆಸರು ಪೃಥ್ವಿರಾಜ ಮುಗೆರೋಡಿ. ಪ್ರಸ್ತುತ ಕಡಬದ ತಾಲೂಕಿನ ಅಡಮಂಗಳದಲ್ಲಿ ನೆಲೆಸಿರುವ ಇಂಜಿನಿಯರ್ ಆಗಿರುವ ರತ್ನಾಕರ ಮುಗೆರೋಡಿ ಹಾಗೂ ಹರ್ಷಿತಾ ಪ್ರಿಯಂವದಾ ದಂಪತಿಗಳ ಪುತ್ರನಾಗಿರುವ ಪೃಥ್ವಿರಾಜ್ ’ಗೆ ಇನ್ನು 2 ವರ್ಷ 11 ತಿಂಗಳಷ್ಟೇ.
ಈ ಪುಟ್ಟ ವಯಸ್ಸಿನಲ್ಲೇ 30 ಕಂಪೆನಿಗಳನ್ನು ಅವುಗಳ ಲೋಗೋಗಳನ್ನು ನೋಡುವ ಮೂಲಕ ಗುರುತಿಸಿದ್ದಾನೆ. ಈತನ ಈ ಜ್ಞಾಪಕ ಶಕ್ತಿಯನ್ನು "ಇಂಡಿಯಾ ಬುಕ್ ಆಫ್ ರೆಕಾರ್ಡ್" ಸಂಸ್ಥೆಯು ಗುರುತಿಸಿ ಅವರ ಈ ಸಾಧನೆಯನ್ನು ಗುರುತಿಸಿ ಅಧಿಕೃತ ದಾಖಲೆಯ ಪ್ರಮಾಣ ಪತ್ರ ಹಾಗೂ ಮೆಡಲ್ ನೀಡಿ ಗೌರವಿಸಿದೆ.