ಮಲ್ಪೆ, ಜು 10 (Daijiworld News/MSP): ಮಳೆಗಾಲ ಬಂತೆಂದರೆ ಸಾಕು ಹೊಳೆಮೀನು, ಗಾಳದ ಮೀನಿಗೆ ಭಾರಿ ಬೇಡಿಕೆ .ಇದೀಗ ಮಳೆಗಾಲದ ಯಾಂತ್ರಿಕ ಮೀನುಗಾರಿಕೆ ನಿಷೇಧ ಸಂದರ್ಭದಲ್ಲಿ ಮೀನು ಪ್ರಿಯರಿಂದ ಹೊಳೆ ,ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಮುಂದುವರೆದಿದೆ.

ಮಲ್ಪೆ ಬಂದರು ಸಮೀಪ ಸೀ-ವಾಕ್ ಬಳಿಯಲ್ಲಿ ವರ್ಷದ 365 ದಿನವೂ ಗಾಳ ಹಾಕಿ ಮೀನು ಹಿಡಿಯುವ ಬಹಳಷ್ಟು ಮಂದಿ ಕಾಣ ಸಿಗುತ್ತಾರೆ. ಕೆಲವರು ಹವ್ಯಾಸಕ್ಕಾಗಿ ಗಾಳ ಹಾಕಿದರೆ ಕೆಲವರು ಜೀವನೋಪಯಕ್ಕಾಗಿ ಗಾಳ ಹಾಕಿ ಮೀನು ಹಿಡಿದು ಮಾರಾಟ ಮಾಡುವುದನ್ನು ಕಾಣಬಹುದಾಗಿದೆ. ಸಮುದ್ರದ ತಾಜಾ ಮೀನು ಸಿಗದ ಕಾರಣ ಬಹುತೇಕ ಮಂದಿ ಹೊಳೆ ಬದಿಯಲ್ಲಿ ಸೇತುವೆಯ ಮೇಲ್ಭಾಗದಲ್ಲಿ ನಿಂತು ಗಾಳ ಹಾಕುವರು ಕಾಣಸಿಗುತ್ತಾರೆ.ಮೀನು ಹಿಡಿಯುದರಲ್ಲಿ ಒಂದು ಮನೋರಂಜನೆ ನೀಡುತ್ತದೆ. ನಾನಾ ತರದ ಗಾಳದಲ್ಲಿ ಬಗೆ ಬಗೆಯ ಮೀನು ಹಿಡಿಯಲಾಗುತ್ತದೆ.
ಅದರಲ್ಲು ನಗರ ಪ್ರದೇಶ ಮಂದಿಗೆ ಗಾಳ ಹಾಕಿ ಮೀನು ಹಿಡಿಯುವುದರಲ್ಲಿ ಆಸಕ್ತಿ ಹೆಚ್ಚು॒. ಮಲ್ಪೆ ಬಂದರು ಸಮೀಪ ಸೀ-ವಾಕ್ ಬಳಿ ಗುಂಪು ಗುಂಪಾಗಿ ಸಮುದ್ರದ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲೆಂದು ಇಲ್ಲಿಗೆ ಬಂದು ಸೇರುತ್ತಾರೆ. ಹಿಂದೆ ಕೈ ಗಾಳದಲ್ಲಿ ಮಾತ್ರ ಮೀನು ಹಿಡಿಯಲಾಗುತ್ತಿದ್ದು ಇದೀಗ ಆಧುನಿಕ ಸಲಕರಣೆಗಳು ಬಂದಿರುವುದರಿಂದ ಮೀನುಗಾರರು ಗಾಳ ಹಾಕಿ ಮೀನು ಹಿಡಿಯುದನ್ನು ಕಾಣ ಸಿಗುತ್ತದೆ. ಇಲ್ಲಿಯ ಮೀನುಗಾರರು ಗಾಳವನ್ನು ಉಪಯೋಗಿಸಿ 6 ರಿಂದ 20 ಕೇಜಿ ತೂಕದ ಕೆಂಬೆರಿ, ಮುರುಮೀನು, ಕುಲೇಜ್, ಅಂಬಾಯಿ ಜೀಗೆ ನಾನಾ ತರಹದ ಮೀನುಗಳನ್ನು ಹಿಡಿಯಲಾಗುತ್ತದೆ.
ಮೀನುಗಾರಿಕೆಗೆ ತೆರಳದ ಕಾರಣ ನಾವೆಲ್ಲರೂ ಇಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದೆವೆ, ಬಂದರಿನಲ್ಲಿ ಕೆಲಸ ಇಲ್ಲದ ಕಾರಣ ಎಲ್ಲರು ಇಲ್ಲಿ ಬಂದು ಗಾಳ ಹಾಕಿ ಮೀನು ಹಿಡಿಯಲು ಮುಂದುವರೆಯುತ್ತಾರೆ.ಇಲ್ಲಿ ಅನೇಕ ಜನರು ಗಾಳವನ್ನು ಹಾಕಿ ಮೀನು ಹಿಡಿಯಲು ಆಗಮಿಸುತ್ತಾರೆ ಎಂದು ಮೀನುಗಾರರು ಹೇಳಿದ್ದಾರೆ.