ಬೆಳ್ತಂಗಡಿ, ಜು 10(DaijiworldNews/SM): ತಾಲೂಕಿನಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಶುಕ್ರವಾರ ಒಂದೇ ದಿನ ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಗುಂಡೂರಿ ಗ್ರಾಮದ 27 ವರ್ಷದ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಮತ್ತೋರ್ವ ಗುಂಡೂರಿ ಗ್ರಾಮದ 10 ವರ್ಷದ ಮಗುವಿಗೆ ಪಾಸಿಟಿವ್ ದೃಢಪಟ್ಟಿದೆ. ಕುವೆಟ್ಟು ಗ್ರಾಮದ 59 ವರ್ಷದ ವ್ಯಕ್ತಿ ಹಾಗೂ ಪಡಂಗಡಿ ಗ್ರಾಮದ 48 ವರ್ಷದ ಮಹಿಳೆ ಹಾಗೂ ಲಾಲ ರಾಘವೇಂದ್ರ ಮಠದ 65 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.