ಕುಂದಾಪುರ, ಜು.11 (DaijiworldNews/MB) : ಕುಂದಾಪುರ ತಾಲೂಕು ಉಳ್ಳೂರು 74 ಗ್ರಾಮದ ಶಿವರಾಮ ಶೆಟ್ಟಿಯವರ ಮನೆಯ ಬಾವಿಗೆ ಕಾಡುಕೋಣವೊಂದು ಬಿದ್ದಿದ್ದು, ಸ್ಥಳೀಯರು, ಅರಣ್ಯ ಇಲಾಖೆಯ ಅಧಿಕಾರಿಗಳ ಸತತ ಪರಿಶ್ರಮದಿಂದ ಕಾಡುಕೋಣವನ್ನು ಸುರಕ್ಷಿತವಾಗಿ ಮೇಲೆತ್ತಿ ಅರಣ್ಯಕ್ಕೆ ಬಿಡಲಾಗಿದೆ.



ಆಕಸ್ಮಾತ್ 12 ವರ್ಷ ಹೆಣ್ಣು ಕಾಡೆಮ್ಮೆ ಆಳವಾದ ಬಾವಿಗೆ ಬಿದ್ದಿದೆ. ಬಾವಿ ಆಳ ಇರುವುದರಿಂದ ಕಾಡೆಮ್ಮೆಗೆ ಮೇಲೆ ಬರಲು ಸಾಧ್ಯವಾಗಲಿಲ್ಲ. ಇದನ್ನು ಕಂಡ ಸ್ಥಳೀಯರು ಹಾಗೂ ಆರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾಡುಕೋಣವನ್ನು ಮೇಲೆತ್ತಲು ಯೋಜನೆ ರೂಪಿಸಿದರು.
ಜೆಸಿಬಿ ಯಂತ್ರ ಬಳಸಿ ಸಾಕಷ್ಟು ಕಾಲುವೆ ಕೊರೆಯಲಾಯಿತು. ಕಾಡುಕೋಣಕ್ಕೆ ಎರಡು ಕಡೆಗಳಿಂದ ಹಗ್ಗ ಕಟ್ಟಿ ಮೇಲೆತ್ತಲಾಯಿತು. ಬಾವಿ ಕಾಡು ಸಮೀಪದಲ್ಲಿ ಇರುವುದರಿಂದ ಬಾವಿಯಿಂದ ಸುರಕ್ಷಿತವಾಗಿ ಮೇಲೆ ಬಂದ ಕಾಡುಕೋಣ ಕಾಡಿಗೆ ಹೋಯಿತು.