ಕೋಟ, ಜು 11 (Daijiworld News/MSP): ಕೋಟದಲ್ಲಿ ಕಳೆದ ವಾರ ದಿನಸಿ ಅಂಗಡಿ ಮಾಲಿಕರ ಮನೆಯ ನಾಲ್ವರಿಗೆ ಪಾಸಿಟಿವ್ ಬಂದ ನಾಲ್ಕೆ ದಿನದಲ್ಲಿ ಅಲ್ಲಿ ಕಾರ್ಯನಿರ್ವಹಿಸುವ ತೆಕ್ಕಟ್ಟೆ ಪರಿಸರದ ಒರ್ವಾಕೆ ಹಾಗೆ ಅಂಗಡಿ ಮಾಲಿಕನ ಮನೆಯ ಇರ್ವರಿಗೆ,ಸಾಲಿಗ್ರಾಮದ ಪರಿಸರದ ಹೋಟೆಲ್ ಒಂದರ ಇಬ್ಬರು ಕಾರ್ಮಿಕರಿಗೆ,ಕೋಟದ ಸೊಸೈಟಿ ಒಂದರಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಶುಕ್ರವಾರ ಪಾಸಿಟಿವ್ ಬಂದಿದೆ.

ಆಯಾ ಭಾಗಗಳಿಗೆ ಕೋಟದ ಕಂದಾಯ ಅಧಿಕಾರಿ ರಾಜು,ಕೋಟದ ಗ್ರಾಮಲೆಕ್ಕಿಗ ಚಲುವರಾಜು,ಚಿತ್ರಪಾಡಿ ಗ್ರಾಮಲೆಕ್ಕಿಗ ಮಹೇಂದ್ರ ಆಚಾರ್ಯ ,ಕೋಟ ಆರಕ್ಷಕ ಸಿಬ್ಬಂದಿ ತೆರಳಿ ಸೀಲ್ಡೌನ್ ಪ್ರಕ್ರೀಯೆಯನ್ನು ಪೂರ್ಣಗೊಳಿಸಿದ್ದಾರೆ.