ಮಂಗಳೂರು ಸೆ21: ಕೇಂದ್ರ ಸರಕಾರದ ಪೆಟ್ರೋಲ್,ಡೀಸೆಲ್ ಬೆಲೆಯೇರಿಕೆ ವಿರುದ್ದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ದ.ಕ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್, ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಆಗಿದ್ದರು ಬಾರತದಲ್ಲಿ ಪೆಟ್ರೋಲ್, ಡಿಸೀಲ್ ದರ ಮಾತ್ರ ಏರಿಕೆ ಆಗ್ತಾನೆ ಇದೆ. ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಪೈಸೆಗಳಂತೆ ಏರುತ್ತಿದ್ದ ತೈಲ ದರ ಇಂದು ರೂಪಾಯಿಗಳಂತೆ ಏರುತ್ತಿದೆ. ಕೇಂದ್ರದ ಬಿಜೆಪಿ ಸರಕಾರ ಈ ರೀತಿಯಲ್ಲಿ ಹಗಲು ದರೋಡೆಗೆ ಇಳಿದಿದೆ ಎಂದು ಕಿಡಿಕಾರಿದರು. ಮೋದಿ ದೇಶಕ್ಕಾಗಿ ಎಲ್ಲವನ್ನು ಬಿಟ್ಟು ಬಂದರೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಪ್ರಧಾನಿ ತೊರೆದಿದ್ದು ಹೆಂಡತಿಯನ್ನು ಮಾತ್ರ ಎಂದು ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡ ಇಬ್ರಾಹಿಂ ಕೋಡಿಜಾಲ, ಕೇಂದ್ರ ಸರಕಾರ ತಲಾಖ್ ಹಾಗೂ ಗೋಹತ್ಯೆಯ ಚರ್ಚೆನ್ನು ನಡೆಸುವುದರಲ್ಲೇ ಮಗ್ನವಾಗಿದೆ. ಹೀಗಾಗಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಜನರ ಕಷ್ಟಗಳ ಬಗ್ಗೆ ಸ್ಪಂದಿಸಲು ಸಮಯವಿಲ್ಲ ಎಂದು ಆರೋಪಿಸಿದರು.