ಪುತ್ತೂರು, ಜು 11 (DaijiworldNews/PY): ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹಾಗೂ ಮಹಿಳಾ ಕಾನ್ಸ್ಟೇಬಲ್ ಓರ್ವರ ತಾಯಿ ಸೇರಿದಂತೆ ಐವರಿಗೆ ಕೊರೊನಾ ದೃಢಪಟ್ಟಿದೆ ಎಂದು ವರದಿಯಾಗಿದೆ.

ಠಾಣೆಯ 30 ವರ್ಷದ ಕಾನ್ಸ್ಟೇಬಲ್ ಹಾಗೂ ಮಹಿಳಾ ಕಾನ್ಸ್ಟೇಬಲ್ ಓರ್ವರ 40 ವರ್ಷದ ತಾಯಿಗೆ ಕೊರೊನಾ ಸೋಂಕು ದೃಢವಾಗಿದೆ.
ಕಾನ್ಸ್ಟೇಬಲ್ ವಾಸ ಮಾಡುತ್ತಿದ್ದ ಸಂಪ್ಯ ವಸತಿ ಗೃಹದ ಕೊಠಡಿಯನ್ನು ಹಾಗೂ ಮಹಿಳಾ ಕಾನ್ಸ್ಟೇಬಲ್ ಅವರ ತಾಯಿ ಮಾಸ ಮಾಡುತ್ತಿದ್ದ ಪುತ್ತೂರು ವಸತಿ ಗೃಹದ ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬನ್ನೂರು ನೀರ್ಪಾಜೆ ನಿವಾಸಿ 42 ವರ್ಷದ ವ್ಯಕ್ತಿ, ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ 22 ವರ್ಷದ ಬಾಣಂತಿ ಹಾಗೂ ತಿಂಗಳಾಡಿ ಸಮೀಪದ ನಿಡ್ಯಾಣ ನಿವಾಸಿ 56 ವರ್ಷ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.