ಸುಬ್ರಹ್ಮಣ್ಯ, ಜು 11 (DaijiworldNews/PY): ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಅವರ ಪತ್ನಿ ಸಮೇತರಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದರು.

ಕೊರೊನಾ ಹಿನ್ನೆಲೆ ಎಸ್ಸೆಸ್ಸೆಲ್ಸಿ ಮುಂದೂಡಲಾಗಿತ್ತು. ಬಳಿಕ ಜೂ 25ರಂದು ಪರೀಕ್ಷೆ ನಡೆದಿದ್ದು, ಜುಲೈ 4ರಂದು ಯಾವುದೇ ತೊಂದರೆ ಇಲ್ಲದೇ ಯಶಸ್ವಿಯಾಗಿ ಮುಗಿದ ನಿಟ್ಟಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಶುಕ್ರವಾರ ಶಿಕ್ಷಣ ಸಚಿವರು ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು.