ಉಡುಪಿ, ಜು 11 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ಶನಿವಾರ 573 ಜನರಿಗೆ ನೆಗೆಟಿವ್ ಮತ್ತು ಬಹಳ ದಿನಗಳ ನಂತರ ಏಕಾಏಕಿ 90 ಜನರಿಗೆ ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಶನಿವಾರ 573 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 2030 ಜನರ ವರದಿಗಳು ಬರಬೇಕಾಗಿದೆ. ಸದ್ಯ 319 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ 11 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,285 ಮಂದಿ ಮನೆಗಳಲ್ಲಿ ಮತ್ತು 137 ಜನರು ಆಸ್ಪತ್ರೆಗಳ ಐಸೊಲೇಶನ್ ವಾರ್ಡ್ಗಳಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 1567 ಕೊರೊನಾ ಪ್ರಕರಣ ಪತ್ತೆಯಾಗಿದೆ.