ಕಾಸರಗೋಡು, ಜು 11(DaijiworldNews/SM): ಜಿಲ್ಲೆಯಲ್ಲಿ ಶನಿವಾರ 18 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಏಳು ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಮಂಗಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ ಆರು ಮಂದಿಗೆ ಶನಿವಾರ ಸೋಂಕು ದೃಢಪಟ್ಟಿದೆ.

ಮೊಗ್ರಾಲ್ ಪುತ್ತೂರಿನ ಮೂವರು, ಕಾಸರಗೋಡು, ಕುಂಬಳೆ, ವರ್ಕಾಡಿ, ಮೀ0ಜ, ಕಳ್ಳಾರ್, ಉದುಮ, ಪಿಲಿಕ್ಕೋಡು, ಕಾಞ0ಗಾಡ್, ತ್ರಿಕ್ಕರಿಪುರದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 585ಕ್ಕೆ ಏರಿಕೆಯಾಗಿದೆ. ಈ ಪೈಕಿ 427 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಮಂಗಲ್ಪಾಡಿ ಪಂಚಾಯತ್ ನ 74 ಹಾಗೂ 21 ವರ್ಷದ ಹಾಗೂ ಮೂರು ವರ್ಷದ ಬಾಲಕಿಗೆ ಕುಂಬಳೆಯಲ್ಲಿ 19 ವರ್ಷದ ಯುವಕ ಮೀ0ಜದ್ದಲ್ಲಿ 43 ವರ್ಷದ ಮಹಿಳೆ, ವರ್ಕಾಡಿ ಪಂಚಾಯತ್ ನ 10 ವರ್ಷದ ಬಾಲಕಿ, ಒಂದು ವರ್ಷದ ಮಗುವಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ಹತ್ತು ಮತ್ತು ಒಂದು ವರ್ಷದ ಮಕ್ಕಳಿಗೆ ಜುಲೈ 5ರಂದು ಸೋಂಕು ದ್ರಢಪಟ್ಟ ಲ್ಯಾಬ್ ಟೆಕ್ನಿಷಿಯನ್ ಳಿಂದ ಸೋಂಕು ತಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.