ಮಂಗಳೂರು, ಜು 11 (DaijiworldNews/SM): ದ.ಕ. ಜಿಲ್ಲೆಯಲ್ಲಿ ಶನಿವಾರದಂದು ಮತ್ತೆ 186 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ.

ಜಿಲ್ಲೆಯಲ್ಲಿ ಇಂದಿನ ತನಕ ಒಟ್ಟು 2034 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ 1211 ಮಂದಿ ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಶನಿವಾರದಂದು 29 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ 782ಕ್ಕೆ ಏರಿಕೆಯಾಗಿದೆ.
ಇನ್ನು ಇಲ್ಲಿಯ ತನಕ 20798 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.
186 ಮಂದಿ ಸೋಂಕಿತರು ಯಾರು?
ಇನ್ನು ಜಿಲ್ಲೆಯಲ್ಲಿ ಪ್ರಾಥಮಿಕ ಸಂಪರ್ಕದಿಂದ 37 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 64 ಮಂದಿಯಲ್ಲಿ ಐಎಲ್ ಐ ಪ್ರಕರಣ ಪತ್ತೆಯಾಗಿದೆ. 17 ಮಂದಿಯಲ್ಲಿ ಸಾರಿ ಪ್ರಕರಣ ದೃಢಪಟ್ಟಿದೆ. ಇಬ್ಬರು ಬೆಂಗಳೂರಿನಿಂದ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ. ಕತಾರ್ ಹಾಗೂ ದುಬೈನಿಂದ ಮರಳಿದ ಹತ್ತು ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಏಳು ಪ್ರಕರಣಗಳು ಪ್ರಿಸರ್ಜರಿ ಪ್ರಕರಣಗಳಾಗಿವೆ. 32 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ರ್ಯಾಂಡಮ್ ಟೆಸ್ಟ್ ನಿಂದ ಹದಿಮೂರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಾಲ್ಕು ಪ್ರಿ ಡೆಲಿವರಿ ಪ್ರಕರಣಗಳಾಗಿವೆ.