ಮಂಗಳೂರು, ಜು 11(DaijiworldNews/SM): ಶನಿವಾರ ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೆ ಮೂವರು ಬಲಿಯಾಗಿದ್ದಾರೆ. ಆ ಮೂಲಕ ದ.ಕ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಜುಲೈ 11ರ ಶನಿವಾರದಂದು ದ.ಕ. ಜಿಲ್ಲೆಯಲ್ಲಿ ಕೊರೊನಾದಿಂದಾಗಿ 33 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರು ಲೂಕ್ಯೂಮಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ೬೭ ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದು, ಅವರಲ್ಲಿ ನ್ಯೂಮೋನಿಯಾ ಸಮಸ್ಯೆಯಿತ್ತು ಎಂದು ತಿಳಿದುಬಂದಿದೆ. ಈ ನಡುವೆ 78 ವರ್ಷದ ವ್ಯಕ್ತಿ ಕೂಡ ಸೋಂಕಿಗೆ ಬಲಿಯಾಗಿದ್ದು, ಅವರು ಡಯಾಬಿಟಿಸ್ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಆ ಮೂಲಕ ದ.ಕ. ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ೪೧ಕ್ಕೆ ಏರಿಕೆಯಾಗಿದೆ.