ಮಂಗಳೂರು, ಜು.12 (DaijiworldNews/MB) : ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ್ಯಂತ ಭಾನುವಾರ ಲಾಕ್ಡೌನ್ ಮಾಡಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಆದೇಶಿಸಿದ್ದು ಕಳೆದ ಭಾನುವಾರದಂತೆ ಈ ಭಾನುವಾರವು ಮಂಗಳೂರು ಸ್ತಬ್ಧವಾಗಿದೆ.

















ಮಾರುಕಟ್ಟೆ, ಅಂಗಡಿಗಳು ಮುಚ್ಚಿದ್ದರಿಂದ ಮಂಗಳೂರು ನಿರ್ಜನವಾಗಿದ್ದು ಹಾಲಿನ ಅಂಗಡಿಗಳು, ಮೆಡಿಕಲ್ಗಳಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಮಾಂಸ ಹಾಗೂ ಮೀನು ಮಾರುಕಟ್ಟೆಗಳು ಬಂದ್ ಆಗಿದೆ.
ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದು, ಲಾಕ್ಡೌನ್ ನಿಯಾಮಾವಳಿ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ.
ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು ಸೂಕ್ತ ಕಾರಣಗಳು ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರದಿಂದ ಕೊರೊನಾ ವೈರಸ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜುಲೈ 11 ರ ಶನಿವಾರದಂದು ಸೋಂಕಿತರ ಸಂಖ್ಯೆಯು 2000 ದಾಟಿದೆ. ಈವರೆಗೆ 41 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.