ಉಡುಪಿ, ಜು.12 (DaijiworldNews/MB) : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಾರಿ ಮಾಡಲಾಗಿರುವ ಸಂಡೇ ಲಾಕ್ಡೌನ್ಗೆ ಉಡುಪಿ ಜಿಲ್ಲೆಯಲ್ಲಿ ಕಳೆದ ವಾರದಂತೆ ಈ ವಾರವೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.






ಭಾನುವಾರ ಎಲ್ಲಾ ಅಂಗಡಿಗಳು ಮುಚ್ಚಿದ್ದು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹಾಗೆಯೇ ಪ್ರತಿ ವಾರ ಸಂತೆಕಟ್ಟೆಯಲ್ಲಿ ನಡೆಯುವ ವಾರದ ಸಂತೆಯೂ ಕೂಡಾ ಮುಚ್ಚಲಾಗಿದೆ.
ಆರೋಗ್ಯ ಸೇವೆಗಳು ಮತ್ತು ಇತರ ಅಗತ್ಯ ಸೇವೆಗಳನ್ನು ಮಾತ್ರ ಸಾರ್ವಜನಿಕರಿಗೆ ತೆರೆಯಲಾಗಿದ್ದು ಪೊಲೀಸರು ಪ್ರತಿ ವಾಹನವನ್ನು ಪರಿಶೀಲಿಸುತ್ತಿದ್ದಾರೆ. ಅನಾವಶ್ಯಕವಾದ ಓಡಾಟಕ್ಕೆ ಅವಕಾಶವಿಲ್ಲ.
ಜಿಲ್ಲೆಯ ಅನೇಕ ಭಾಗಗಳಲ್ಲಿ ಜನರು ಸ್ವಯಂ ಲಾಕ್ಡೌನ್ಗೆ ಒಳಗಾಗಿದ್ದು ನಗರದಲ್ಲಿ ಜನರ ಸಂಚಾರ ತೀರ ಕಡಿಮೆಯಾಗಿದೆ.