ಉಡುಪಿ, ಜು.12 (DaijiworldNews/MB) : ಉಡುಪಿಯಲ್ಲಿ ಜುಲೈ 12 ರ ಭಾನುವಾರ ಕೊರೊನಾಗೆ ನಾಲ್ಕನೇ ಬಲಿಯಾಗಿದೆ ಎಂದು ವರದಿಯಾಗಿದೆ.

ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆಗಾಗಿ ಗುರುವಾರ ಉಡುಪಿಗೆ ಬಂದಿದ್ದ ದಾವಣಗೆರೆ ಮೂಲದ 72 ವರ್ಷದ ವ್ಯಕ್ತಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಸೋಂಕು ದೃಢಪಟ್ಟಿತ್ತು.
ಕೊರೊನಾ ನಿಯಾಮಾವಳಿ ಪ್ರಕಾರವಾಗಿ ಸದ್ಯ ಉಡುಪಿಯಲ್ಲೇ ಅಂತಿಮ ಸಂಸ್ಕಾರ ನಡೆಯಲಿದ್ದು ಡಯಾನ ಸರ್ಕಲ್ ಬಳಿ ಇರುವ ಕಬರಿಸ್ಥಾನದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ 1,567 ಪ್ರಕರಣಗಳು ದೃಢಪಟ್ಟಿದ್ದು ಇಂದು ಸಾವನ್ನಪ್ಪಿದ ವ್ಯಕ್ತಿ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದೆ.