ಬಂಟ್ವಾಳ, ಜು 12 (DaijiworldNews/PY): ಪ್ರಸಿದ್ದ ಹಿರಿಯ ಕಲಾವಿದ , ನಾಟಕ ರಚನೆಕಾರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ 9.30 ರ ಸುಮಾರಿಗೆ ಕಳ್ಳಿಗೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದರಿಬಾಗಿಲು ಬದ್ಯಾರು ನಿವಾಸಿ ಗಿರಿಯಪ್ಪ ಕುಲಾಲ್ ಬದ್ಯಾರು (58). ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಬಿ.ಸಿರೋಡಿನ ಗಾಣದಪಡ್ಪು ಎಂಬಲ್ಲಿ ಕಾಂತಿ ಆರ್ಟ್ಸ್ ಎಂಬ ಹೆಸರಿನ ಸಂಸ್ಥೆಯ ಮೂಲಕ ಬ್ಯಾನರ್, ಸಹಿತ ಅನೇಕ ರೀತಿಯ ಕಲೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ನಡೆಸುತ್ತಿದ್ದರು.
ಗಿರಿಯಪ್ಪ ಬದ್ಯಾರು ಅವರು ಹೆಸರು ನಾಟಕರಂಗದ ಲ್ಲಿ ಪ್ರಸಿದ್ಧಿ ಪಡೆದಿವೆ. ಇವರು ಸುಮಾರು 60 ಕ್ಕೂ ಅಧಿಕ ತುಳು ಸಾಮಾಜಿಕ, ಹಾಸ್ಯ ಹಾಗೂ ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ.