ಮಂಗಳೂರು, ಎಪ್ರಿಲ್ 12 : 2018-19ನೇ ಸಾಲಿನಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದ್ದು, ದಾಖಲಾತಿ ಸಂದರ್ಭದಲ್ಲಿ ಎಲ್ ಕೆಜಿಯಿಂದ ಖಾಸಗಿ ಪ್ರೌಢ ಶಾಲೆಯ ವರೆಗಿನ ಪ್ರವೇಶಾತಿ ಕುರಿತಂತೆ ಶಾಲಾ ಆಡಳಿತ ಮಂಡಳಿ ಶಾಲಾ ಮುಖ್ಯಸ್ಥರು ತಮ್ಮ ಶಾಲೆಯಲ್ಲಿ ಲಭ್ಯವಿರುವ ಸೀಟುಗಳು ಮತ್ತು ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶಾಲಾ ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಲು ಹಾಗೂ ದಾಖಲಾತಿ ಸಂದರ್ಭ ಪಡೆಯ ಬಹುದಾದ ಶುಲ್ಕ ವಿವರವನ್ನು ಶಾಲಾ ಆವರಣ ಮತ್ತು ಗೇಟಿನ ಮುಂಭಾಗ ದೊಡ್ಡ ಬೋರ್ಡ್ ನಲ್ಲಿ ಪ್ರಕಟಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಫಲಕದಲ್ಲಿ ಪ್ರಕಟಿಸಬೇಕಾದ ವಿಷಯದ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಿಂದ ಪಡೆದು ಪ್ರತಿ ಶಾಲೆಗಳಲ್ಲಿ ಪ್ರಕಟಿಸುವಂತೆ ಇಲಾಖೆ ಸೂಚಿಸಿದೆ.