ಉಡುಪಿ, ಜು 12 (DaijiworldNews/PY): ಉಡುಪಿ ಜಿಲ್ಲೆಯಲ್ಲಿ ಭಾನುವಾರ 573 ಮಂದಿಗೆ ನೆಗೆಟಿವ್ ಹಾಗೂ 41 ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಈ ಪೈಕಿ ಮುಂಬೈಯಿಂದ 2, ಸೌದಿಯಿಂದ 1, ಅಂತರ್ ಜಿಲ್ಲೆಯಿಂದ ಪ್ರಯಾಣ ಮಾಡಿದವರಲ್ಲಿ 632 ಮಂದಿಗೆ ಪಾಸಿಟಿವ್ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಸೋಂಕುತಗುಲಿದೆ. ಇದರಲ್ಲಿ 26 ಪುರುಷರು, 11 ಮಹಿಳೆಯರು ಸೇರಿದಂತೆ 4 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ. 26 ಮಂದಿ ಉಡುಪಿ, 11 ಮಂದಿ ಕುಂದಾಪುರ ಹಾಗೂ 4 ಮಂದಿ ಕಾರ್ಕಾಳಕ್ಕೆ ಸೇರಿದವರಾಗಿದ್ದಾರೆ.
ಭಾನುವಾರ 269 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 1856 ಜನರ ವರದಿಗಳು ಬರಬೇಕಾಗಿದೆ. ಭಾನುವಾರ 28 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು 1273 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 1304 ಮಂದಿ ಮನೆಗಳಲ್ಲಿ ಮತ್ತು 140 ಜನರು ಆಸ್ಪತ್ರೆಗಳ ಐಸೊಲೇಶನ್ ವಾರ್ಡ್ಗಳಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಪ್ರಸ್ತುತ 332 ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 1608 ಕೊರೊನಾ ಪ್ರಕರಣ ಪತ್ತೆಯಾಗಿದೆ.