ಮಂಗಳೂರು, ಜು.12 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮಂಗಳವಾರದಿಂದ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲ ಎಂದು ದೈಜಿವರ್ಲ್ಡ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಮಂಗಳವಾರದಿಂದ ದ.ಕ. ಜಿಲ್ಲೆಯಲ್ಲಿ ಲಾಕ್ಡೌನ್ ಇಲ್ಲ. ಲಾಕ್ಡೌನ್ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಜನರು ಆತಂಕಗೊಳ್ಳುವುದು ಬೇಡ. ಸೋಮವಾರದಂದು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಲಾಕ್ಡೌನ್ ಮಾಡುವುದಾದರೂ ಸೂಕ್ತ ಕ್ರಮದೊಂದಿಗೆ ಲಾಕ್ಡೌನ್ ಮಾಡಲಾಗುವುದು. ಲಾಕ್ಡೌನ್ ಮಾಡುವುದಾದರೆ ೨ ದಿನಗಳ ಮುಂಚೆ ತಿಳಿಸುತ್ತೇವೆ. ಆತುರವಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಲಾಕ್ಡೌನ್ ಮಾಡುವುದಾದರೂ ಜನರಿಗೆ ಸಮಯ ಕೊಡುತ್ತೇವೆ. ಏಕಾಏಕಿ ತೀರ್ಮಾನ ಕೈಗೊಂಡು ಜನತೆಗೆ ತೊಂದರೆ ನೀಡುವುದಿಲ್ಲ ಎಂದು ದೈಜಿವರ್ಲ್ಡ್ ವಾಹಿನಿಗೆ ಸ್ಪಷ್ಟನೆ ನೀಡಿದ್ದಾರೆ.