ಮಂಗಳೂರು, ಜು13 (Daijiworld News/MSP): ಕೊವೀಡ್ - 19 ಆತಂಕದ ನಡುವೆಯೇ ಜಿಲ್ಲೆಯಲ್ಲಿ ಸೋಮವಾರದಿಂದ ಎಸೆಸೆಲ್ಸಿ ಮೌಲ್ಯಮಾಪನ ಆರಂಭವಾಗಲಿದೆ. ಮಂಗಳೂರಿನ 8 ಕೇಂದ್ರದಲ್ಲಿ1300 ಶಿಕ್ಷಕರು ಮೌಲ್ಯಮಾಪನ ನಡೆಸಲಿದ್ದಾರೆ.

ಸಾಂದರ್ಭಿಕ ಚಿತ್ರ
ಕೊರೊನಾ ಭಯದಿಂದ ತಾಲೂಕು ಕೇಂದ್ರದಲ್ಲೇ ಮೌಲ್ಯಮಾಪನಕ್ಕೆ ಅವಕಾಶ ನೀಡಬೇಕು ಎನ್ನುವ ದ.ಕ ಜಿಲ್ಲೆಯ ಶಿಕ್ಷಕರ ಮನವಿಯನ್ನು ಸರಕಾರ ನಿರಾಕರಿಸಿದೆ. ಹೀಗಾಗಿ ಪ್ರತಿ ತಾಲೂಕಿನಿಂದ ಮೌಲ್ಯಮಾಪನಕ್ಕೆ ಆಗಮಿಸುವ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ಇಲಾಖೆ ಸಿದ್ದಪಡಿಸಿ, ಮೌಲ್ಯಮಾಪನಕರನ್ನು ಕರೆತರುವ ಜವಾಬ್ದಾರಿಯನ್ನು ತಾಲೂಕು ಶಿಕ್ಷಣಾಧಿಕಾರಿಗೆ ನೀಡಲಾಗಿದೆ. ಹೀಗಾಗಿ ಶಿಕ್ಷಕರಿಗಾಗಿಯೇ ಪ್ರತಿ ತಾಲೂಕಿನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಮೌಲ್ಯಮಾಪನವನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ಜು.13 ರಿಂದ ಜು.20 ರವರೆಗೆ ದ.ಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳ 200 ಮೀ. ಸುತ್ತಮುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇದಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.