ಉಳ್ಳಾಲ, ಜು13 (Daijiworld News/MSP): ಎರಡು ದಿನಗಳ ಹಿಂದೆಯಷ್ಟೇ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಹಿಂತಿರುಗುವಾಗ ತಾಂತ್ರಿಕ ದೋಷ ಉಂಟಾಗಿ ಸಮಸ್ಯೆಗೆ ಸಿಲುಕಿದ ಘಟನೆ ಇಲ್ಲಿ ಅಳಿವೆಬಾಗಿಲು ಸಮುದ್ರ ತೀರದಲ್ಲಿ ನಡೆದಿದೆ.

ಇನ್ನೊಂದು ಬೋಟ್ ನಲ್ಲಿ ಹೋಗಿ ಬೋಟ್ ರಿಪೇರಿ ಮಾಡಿ ದಡಕ್ಕೆ ತರಲಾಗಿದೆ. ಉಳ್ಳಾಲ ಕೋಡಿ ಮೂಲದವರಿಗೆ ಸೇರಿದ ಈ ಬೋಟ್ ಎರಡು ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಹಿಂದೆ ಬರುವ ಸಮಯದಲ್ಲಿ ಇಂಜಿನ್ ಸಮಸ್ಯೆ ಉಂಟಾಗಿ ಪೆಟ್ರೋಲ್ ಖಾಲಿಯಾಗಿ ತೊಂದರೆ ಎದುರಾಗಿದೆ. ಕೂಡಲೇ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ಪಡೆಗೆ ನೀಡಲಾಗಿತ್ತು.
ಸೋಮವಾರ ಮುಂಜಾನೆ ಮಂಜೇಶ್ವರದಿಂದ ಮತ್ತೊಂದು ಬೋಟ್ ನಲ್ಲಿ ಮೀನುಗಾರರು ತೆರಳಿ ಬೋಟ್ ನ್ನು ದಡಕ್ಕೆ ತಂದಿದ್ದಾರೆ. ಕರಾವಳಿ ರಕ್ಷಣಾ ಪಡೆ, ಉಳ್ಳಾಲ ಪೊಲೀಸರು ಸಹಕಾರ ನೀಡಿದರು.