ಕುಂದಾಪುರ, ಜು13 (Daijiworld News/MSP): ಕೋವಿಡ್-19 ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿನ ವರ್ತಕರು ಜುಲೈ 13 ಸೋಮವಾರದಿಂದ ಜು.31ರ ತನಕ ಮಧ್ಯಾಹ್ನ 2 ಗಂಟೆಯಿಂದ ತಮ್ಮ ವ್ಯವಹಾರವನ್ನು ಆರ್ಧ ದಿನಕ್ಕೆ ಸ್ಥಗಿತಗೊಳಿಸಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.




ಮಧ್ಯಾಹ್ನ 2 ಗಂಟೆಯಿಂದಲೇ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚುತ್ತಿರುವುದು ಕಂಡು ಬಂತು. ಉಡುಪಿ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಆಗುತ್ತದೋ ಎನ್ನುವ ಗೊಂದಲ ನಿನ್ನೆಯಿಂದ ಕಾಡಿದ್ದು ಇಂದು ಉಡುಪಿ ಜಿಲ್ಲಾ ಲಾಕ್ ಡೌನ್ ಇಲ್ಲ ಎನ್ನುವುದು ದೃಢವಾಗುತ್ತಿದ್ದಂತೆ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ವ್ಯವಹಾರವನ್ನು ಆರ್ಧ ದಿನಕ್ಕೆ ಸೀಮಿತಗೊಳಿಸಿದ್ದಾರೆ.
ಮೊದಲೇ ಸಾಕಷ್ಟು ಪ್ರಚಾರ ನೀಡಿದ್ದರಿಂದ ಗ್ರಾಹಕರು ಬೇಗನೇ ಬಂದು ತಮಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಖರೀಧಿಸಿದ್ದರು. ಇದು ಸ್ವಯಂ ಪ್ರೇರಿತ ಬಂದ್ ಆದ್ದರಿಂದ ಯಾರಿಗೂ ಒತ್ತಡ ಹಾಕಿ ಬಂದ್ ಮಾಡಿಸಿಲ್ಲ. ಎಲ್ಲ ವ್ಯಾಪಾರಸ್ಥರು ಸ್ವ ಇಚ್ಛೆಯಿಂದ ಬಂದ್ ಮಾಡಿದ್ದಾರೆ ಎನ್ನುತ್ತಾರೆ ವರ್ತಕರು.
ಕುಂದಾಪುರದಲ್ಲಿ ಶೇ.80% ಮಿಕ್ಕಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದು ಕಂಡು ಬಂತು.