ಉಡುಪಿ, ಜು.13 (DaijiworldNews/MB) : ಜಿಲ್ಲೆಯ ಕುಂದಾಪುರದಲ್ಲಿ ಸೋಮವಾರ ಇಬ್ಬರು ಪೊಲೀಸರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕುಂದಾಪುರ ಉಪವಿಭಾಗದ ಓರ್ವ ಪೊಲೀಸ್ ಸಿಬ್ಬಂದಿಗೆ ಹಾಗೂ ಕುಂದಾಪುರ ಸಂಚಾರ ಠಾಣೆಯ ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ ಐ ಮತ್ತು ಅವರ ಕಾರು ಚಾಲಕ(ಜಿಲ್ಲಾ ಸಶಸ್ತ್ರ ಪಡೆಯ ಸಿಬಂದಿ) ಗೂ ಕೊರೊನಾ ಪಾಸಿಟಿವ್ ಆಗಿದೆ.
ಕುಂದಾಪುರ ಉಪವಿಭಾಗದ ಓರ್ವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಕಾರಣದಿಂದಾಗಿ ಜುಲೈ 2ರಿಂದ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದರು. ಇಂದು ಸೋಂಕು ಇರುವುದು ದೃಢಪಟ್ಟಿದೆ. ಉಪವಿಭಾಗದ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದ್ದು ಸ್ಯಾನಿಟೈಝ್ ಮಾಡಿದ ಬಳಿಕ ತೆರೆಯಲು ನಿರ್ಧರಿಸಲಾಗಿದೆ.
ಇನ್ನು ಜುಲೈ 5ರಿಂದ ಕ್ವಾರಂಟೈನ್ನಲ್ಲಿದ್ದ ಕುಂದಾಪುರ ಸಂಚಾರ ಠಾಣೆಯ ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ ಐ ಮತ್ತು ಅವರ ಕಾರು ಚಾಲಕಗೂ ಇಂದು ಸೋಂಕು ದೃಢಪಟ್ಟಿದ್ದು ಎಎಸ್ಪಿ ಕಚೇರಿಯನ್ನು ಎರಡು ದಿನಗಳ ಕಾಲ ಮುಚ್ಚಲಾಗುತ್ತದೆ. ಹಾಗೆಯೇ ಸ್ಯಾನಿಟೈಝ್ ಮಾಡಲಿದ್ದು ತಾತ್ಕಾಲಿಕವಾಗಿ ಕಚೇರಿಯನ್ನು ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ವರ್ಗಾಯಿಸಲಾಗಿದೆ.