ಬಂಟ್ವಾಳ, ಜು.13 (DaijiworldNews/MB) : ಇಲೆಕ್ಟ್ರಾನಿಕ್ ವಸ್ತುಗಳ ದಾಸ್ತಾನು ಕೊಠಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಕಲ್ಲಡ್ಕದಲ್ಲಿ ಸೋಮವಾರ ಸಂಜೆ ನಡೆದಿದೆ.



ಕಲ್ಲಡ್ಕ ದ ಪೀದಾ ಎಂಟರ್ ಪ್ರೈಸಸ್ ವಾಣಿಜ್ಯ ಸಂಕೀರ್ಣದಲ್ಲಿ ವಿದ್ಯುತ್ ಸಲಕರಣೆಗಳನ್ನು ದಾಸ್ತಾನು ಇಡಲಾಗಿದ್ದ ಕೊಠಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 15 ಲಕ್ಷ ಸಂಭವಿಸಿದೆ. ಮಧ್ಯಾಹ್ನ ಮೂರು ಗಂಟೆಯ ವೇಳೆ ಈ ಘಟನೆ ಸಂಭವಿಸಿದೆ.
ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಸಿ ಬೆಂಕಿ ಯನ್ನು ನಂದಿಸಿದ್ದಾರೆ.