ಕುಂದಾಪುರ, ಜು.13 (DaijiworldNews/MB) : ವ್ಯಕ್ತಿಯೋರ್ವ ಬರೋಬ್ಬರಿ 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಹೊರಗಡೆ ತಿರುಗಾಡಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಂ ಕ್ವಾರಂಟೈನ್ ನಿಯಮ ಬರೋಬ್ಬರಿ 163 ಬಾರಿ ಉಲ್ಲಂಘಿಸಿದ ಆರೋಪಿ ಮುಂಬಯಿನಿಂದ ಕೋಟೇಶ್ವರಕ್ಕೆ ಬಂದಿದ್ದ ಸಹಬ್ ಸಿಂಗ್.
ಜೂನ್ 29 ರಂದು ಕೋಟೇಶ್ವರದ ಬೈಪಾಸ್ ಬಳಿಯ ಬಾಡಿಗೆ ಮನೆಗೆ ಬಂದಿರುವ ಈ ವ್ಯಕ್ತಿಗೆ ಜು.13 ರವರೆಗೆ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು. ಆದರೆ ಈತ ಉಡುಪಿಯ ಹೋಟೆಲ್ಗಳಿಗೆ ತಿರುಗಾಡಿದ್ದು 163 ಬಾರಿ ತಿರುಗಾಡಿದ್ದಾನೆ ಎಂದು ಮೊಬೈಲ್ ಜಿಪಿಎಸ್ ಟ್ರ್ಯಾಕರ್ನಿಂದ ಪತ್ತೆಯಾಗಿದೆ.
ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ. ಭಟ್ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.