ಕಾಸರಗೋಡು, ಜು. 13 (DaijiworldNews/SM): ವ್ಯಾಪಾರ ಮಳಿಗೆಗಳಲ್ಲಿ ಕೆಲಸ ನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ನ್ನು ಧರಿಸಬೇಕು. ಉಲ್ಲಂಘಿಸಿದ್ದಲ್ಲಿ ಅಂತಹ ವ್ಯಾಪಾರ ಮಳಿಗೆಗಳನ್ನು ಏಳು ದಿನಗಳ ಕಾಲ ಮುಚ್ಚಿಸುವಂತೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಪೊಲೀಸರಿಗೆ ಆದೇಶ ನೀಡಿದ್ದಾರೆ.

ಆದೇಶ ಉಲ್ಲಂಘಿಸುವ ಮಳಿಗೆಗಳನ್ನು ಸೋಂಕು ಮುಕ್ತಗೊಳಿಸಿದ ಬಳಿಕ ತೆರೆಯಲು ಅನುವು ಮಾಡಿಕೊಡಲಾಗುವುದು . ವ್ಯಾಪಾರ ಮಳಿಗೆಗಳ ಮುಂಭಾಗ ಗುಂಪು ಗೂಡದಂತೆ ಅಂಗಡಿ ಮಾಲಕರು ಗಮನಿಸಬೇಕು ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸಂಪರ್ಕದಿಂದ ಸೋಂಕು ದೃಢಪಟ್ಟವರು, ವ್ಯಾಪಾರ ಮಳಿಗೆಗೆ ಸಂಬಂಧಪಟ್ಟವರು ಇವರಿಗೆ ಹೊರ ರಾಜ್ಯಗಳಿಂದ ಸರಕು ಸಹಿತ ಬರುವ ಲಾರಿಗಳ ಸಿಬ್ಬಂದಿಗಳಿಂದ ಸೋಂಕು ತಗಲಿದೆ. ಇದು ಮಾತ್ರವಲ್ಲ ಎಂಟು ಮಂದಿಗೆ ಸೋಂಕು ತಗಲಿದ ಮೂಲ ಇನ್ನೂ ತಿಳಿದುಬಂದಿಲ್ಲ. ಜನರ ಸಹಕಾರದಿಂದ ಮಾತ್ರ ಸೋಂಕು ಹರಡದಂತೆ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.