ಮಂಗಳೂರು, ಜು.14 (DaijiworldNews/MB) : ಮಂಗಳೂರು ನಗರದ ಬಜಿಲಕೇರಿ ಪರಿಸರದಲ್ಲಿ ಯುವಕರ ಮೇಲೆ ಏಕಾಏಕಿ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.



ಘಟನೆಯಿಂದ ಮೂವರಿಗೆ ಗಂಭೀರವಾದ ಗಾಯವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಯಾವ ಕಾರಣಕ್ಕೆ ತಲವಾರು ದಾಳಿ ನಡೆಸಲಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಯುವಕರ ತಂಡದ ನಡುವೆ ವಾಗ್ವಾದ ನಡೆದಿದ್ದು ತಂಡದಿಂದ ತಲವಾರ್ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಇನ್ನು ದುಷ್ಕರ್ಮಿಗಳು ಪೊಲೀಸರ ಸಮಕ್ಷಮದಲ್ಲಿ ಸ್ಥಳೀಯ ಮನೆಗಳಿಗೂ ಕೂಡಾ ಹಾನಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.